ಒಬ್ಬೊಬ್ಬರಾಗಿ ಸ್ಟಾರ್ ನಟ-ನಟಿಯರು ಹಸೆಮಣೆ ಏರುತ್ತಿದ್ದು, ಇದರ ಬೆನ್ನಲ್ಲೇ ಈಗ ತೆಲುಗಿನ ಮೆಗಾ ಕುಟುಂಬದ ಯುವನಟ ವರುಣ್ ತೇಜ್ ಮದುವೆಯ ಸುದ್ದಿ ಹರಿದಾಡುತ್ತಿದ್ದು, ಸದ್ಯದಲ್ಲೇ ಸ್ಟಾರ್ ನಟಿಯ ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.
ಹೌದು, ತೆಲುಗಿನ `ಮುಕುಂದ’ ಚಿತ್ರದ ಮೂಲಕ ನಾಯಕ ನಟನಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಮೆಗಾಸ್ಟಾರ್ ಫ್ಯಾಮಿಲಿಯ ಪ್ರತಿಭಾನ್ವಿತ ನಟ ವರುಣ್ ತೇಜ್‌ಗೆ ಸೌತ್‌ನಲ್ಲಿ ಬೇಡಿಕೆಯಿದ್ದು, ಸಾಕಷ್ಟು ಸಿನಿಮಾಗಳ ಮೂಲಕ ಛಾಪು ಮೂಡಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ತಂದೆ ನಾಗಬಾಬು, ಪವನ್ ಕಲ್ಯಾಣ್ ಅವರಂತಹ ಸ್ಟಾರ್ ನಟರಿದ್ದರೂ ಕೂಡ ತಮ್ಮ ಪರಿಶ್ರಮದಿಂದ ತೆಲುಗು ರಂಗದಲ್ಲಿ ವರುಣ್ ಗಟ್ಟಿನೆಲೆ ಗಿಟ್ಟಿಸಿಕೊಂಡಿದ್ದಾರೆ.
ಸದ್ಯ ಚಿತ್ರರಂಗದಲ್ಲಿ ಒಬ್ಬೊಬ್ಬರೇ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬೆನ್ನಲ್ಲೇ ವರುಣ್ ತೇಜ್ ಮದುವೆ ಸುದ್ದಿ ಈಗ ಹಾಟ್ ಟಾಪಿಕ್ ಆಗಿದೆ. ಇನ್ನೂ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದ್ದು, ಈ ವರ್ಷ ಈ ಜೋಡಿ ಮದುವೆಯ ಕುರಿತು ಗುಡ್ ನ್ಯೂಸ್ ಕೊಡಲಿದೆ ಎನ್ನಲಾಗುತ್ತಿದೆ.