ಬಳ್ಳಾರಿ: ಬಳ್ಳಾರಿ ನಗರ ಕ್ಷೇತ್ರದಿಂದ ಪತ್ನಿ ಅರುಣಾಲಕ್ಷ್ಮೀ ಸ್ಪರ್ಧೆ ಘೋಷಣೆ ಬೆನ್ನಲ್ಲೇ KRPP ಸಂಸ್ಥಾಪಕ ಜನಾರ್ದನ ರೆಡ್ಡಿ ವಿರುದ್ಧ ಸಹೋದರ ಸೋಮಶೇಖರ ರೆಡ್ಡಿ ಸಿಡಿದೆದ್ದಿದ್ದಾರೆ.
ಹೌದು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲು ಸೇರಿದಾಗ ಆತನ ಬಿಡುಗಡೆಗಾಗಿ ಹೋರಾಟ ಮಾಡಿ ನಾನೂ ಜೈಲು ಸೇರಿದ್ದೆ. ಆತನಿಗಾಗಿ 2013ರ ಚುನಾವಣೆಯಲ್ಲೂ ಸ್ಪರ್ಧೆ ಮಾಡಲಿಲ್ಲ. ಈಗ ಆತ KRPP ಸೇರಿಲ್ಲ ಎಂದು ನನ್ನ ವಿರುದ್ಧ ಅಭ್ಯರ್ಥಿ ಹಾಕಿದ್ದಾನೆ. ಪಕ್ಷೇತರನಾಗಿ ಸ್ಪರ್ಧಿಸಿಯಾದರೂ ಮತ್ತೆ BJP ಸೇರುತ್ತೇನೆ ಎಂದು ಸೋಮಶೇಖರ ರೆಡ್ಡಿ ಸಹೋದರನ ವಿರುದ್ಧ ಕಿಡಿಕಾರಿದ್ದಾರೆ.