ನಾಳೆಯ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಆಮದು ಪ್ರಮಾಣ ಕಡಿಮೆಗೊಳಿಸಿ ದೇಶೀಯ ಉತ್ಪಾದನೆ ಉತ್ತೇಜಿಸಲು ಸರ್ಕಾರ ಸುಮಾರು 10ಕ್ಕೂ ಹೆಚ್ಚು ವಸ್ತುಗಳ ಮೇಲಿನ ಕಸ್ಟಮ್ ಸುಂಕ ಹೆಚ್ಚಿಸಲಿದೆ ಎನ್ನಲಾಗಿದೆ.
ಹೌದು, ನಾಳೆ ಕೇಂದ್ರ ಹಣಕಾಸು ಸಚುವೆ ನಿರ್ಮಲ ಸೀತಾರಾಮನ್ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಖಾಸಗಿ ಜೆಟ್, ಹೆಲಿಕಾಪ್ಟರ್, ಅತ್ಯಾಧುನಿಕ ಎಲೆಕ್ಟ್ರಾನಿಕ್ ವಸ್ತುಗಳು, ಪ್ಲಾಸ್ಟಿಕ್ ವಸ್ತು, ಆಭರಣ, ಹೆಚ್ಚು ಹೊಳಪಿನ ಪೇಪರ್, ವಿಟಮಿನ್, ಮರದ ಪೀಠೋಪಕರಣ, ನೀರು ಬಾಟಲಿ ಮತ್ತು ಕ್ರೀಡಾ ಸಾಮಗ್ರಿಗಳ ಮೇಲೆ ಹೆಚ್ಚಿನ ಸುಂಕ ಬೀಳುವ ಸಾಧ್ಯತೆಯಿದ್ದು, ಗ್ರಾಹಕರಿಗೆ ಈ ವಸ್ತುಗಳು ಮತ್ತಷ್ಟು ದುಬಾರಿಯಾಗಲಿವೆ ಎಂದು ವರದಿಯಾಗಿದೆ.