ನಾನು ಬದುಕಿರುವವರೆಗೆ ಕುಮಾರಸ್ವಾಮಿ ಜೊತೆ ಹೊಡೆದಾಡಿಕೊಳ್ಳುವುದಿಲ್ಲ, ಕುಮಾರಸ್ವಾಮಿ ಅವರು ಹೇಳಿದ್ದೇ ಅಂತಿಮ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಹೌದು, ಹಾಸನ ಟಿಕೆಟ್ ಬಗ್ಗೆ ದೇವೇಗೌಡರ ಕುಟುಂಬದಲ್ಲಿ ಬಿನ್ನಾಭಿಪ್ರಾಯ ಕುರಿತು ಮಾತನಾಡಿರುವ ಹೆಚ್.ಡಿ.ರೇವಣ್ಣ, ನಾವಿಬ್ಬರೂ ಹೊಡೆದಾಡಿಕೊಳ್ಳುತ್ತಾರೆ ಎಂದುಕೊಂಡಿದ್ದರೆ ಅಂಥವರಿಗೆ ಭ್ರಮನಿರಸ ಆಗಲಿದೆ. ನನ್ನನ್ನು ಮತ್ತು ಕುಮಾರಸ್ವಾಮಿ ಅವರನ್ನು ಬೇರ್ಪಡಿಸಲು ಯಾರಿಗೂ ಸಾಧ್ಯವಿಲ್ಲ. ಹೆಚ್.ಡಿ.ದೇವೇಗೌಡರ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹಾಸನ ಟಿಕೆಟ್ ಬಗ್ಗೆ ಎಚ್ ಡಿ ಕುಮಾರಸ್ವಾಮಿ, ಎಚ್ ಡಿ ದೇವೇಗೌಡ, ಇಬ್ರಾಹಿಂ ಚರ್ಚಿಸಿ ತೀರ್ಮಾನಿಸುತ್ತಾರೆ ಎಂದಿದ್ದಾರೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ