ಸ್ಯಾಂಡಲ್ ವುಡ್ ಮೋಹಕತಾರೆ ರಮ್ಯಾ ಮತ್ತು ನಟ ಜಗ್ಗೇಶ್ ಮತ್ತೆ ಒಂದಾಗಿದ್ದಾರೆ. ಹೌದು, ನೀರ್‌ದೋಸೆ’ ಚಿತ್ರದ ವೇಳೆ ಉಂಟಾದ ಬಿರುಕಿನ ಬಳಿಕ ಮೊದಲ ಬಾರಿಗೆ ರಮ್ಯಾ ಮತ್ತು ನಟ ಜಗ್ಗೇಶ್ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು, ಮುನಿಸು ಪಕ್ಕಕ್ಕಿಟ್ಟು ನಗು ನಗುತ್ತಾ ಮಾತನಾಡಿದ್ದಾರೆ.
ನಟ ಕಿಚ್ಚ ಸುದೀಪ್ ನೇತೃತ್ವದ `ಕೆಸಿಸಿ’ ಕಾರ್ಯಕ್ರಮದಲ್ಲಿ ರಮ್ಯಾ ಮತ್ತು ನಟ ಜಗ್ಗೇಶ್ ಇಬ್ಬರು ಒಟ್ಟಾಗಿ ಅಕ್ಕ ಪಕ್ಕ ಕುಳಿತು ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನಟ ಜಗ್ಗೇಶ್ ಈ ವಿಡಿಯೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋಗೆ ‘ಕೂಡಿ ಬಾಳೋಣ’ ಎಂಬ ಹಾಡು ಹಾಕಿರುವುದು ಕೂಡ ವಿಶೇಷ.
View this post on Instagram