ತಾಯಿ ಆಸ್ತಿ ಬೇಡ ಎಂದು ತನ್ನ ಸಹೋದರರಿಗೆ ಯಾವ ಪತ್ರದಲ್ಲಿ ಸಹಿ ಹಾಕಿದ್ದಾರೆ ಎನ್ನುವುದು ಮುಖ್ಯ. ಒಂದು ವೇಳೆ ತಾಯಿ ಸ್ವಇಚ್ಛೆಯಿಂದ ಸಹೋದರರಿಗೆ ಹಕ್ಕು ಬಿಡುಗಡೆ ಪತ್ರ ಮಾಡಿಕೊಟ್ಟು, ಅದು ನೋಂದಣಿ ಆಗಿದ್ದರೆ ನಿಮ್ಮ ತಾಯಿ ತನ್ನ ಹಕ್ಕನ್ನು ಮತ್ತೆ ಪ್ರಶ್ನೆ ಮಾಡುವಂತಿಲ್ಲ.
ಆದರೆ, ಬಿಳಿ ಕಾಗದ ಅಥವಾ ನೋಂದಣಿ ಆಗದೆ ಇರುವ ಛಾಪಾ ಕಾಗದದ ಮೇಲೆ ‘ನನಗೆ ಆಸ್ತಿಯಲ್ಲಿ ಹಕ್ಕು ಇಲ್ಲ’ ಎಂಬ ಬರಹಕ್ಕೆ ಸಹಿ ಮಾಡಿದ್ದರೆ, ಆಗ ಕಾನೂನು ಬೇರೆ ಆಗುತ್ತದೆ.