ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಜನಪರ ಬಜೆಟ್ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಹೇಳಿದ್ದು, ಜನಪರ ಬಜೆಟ್ ನ್ನು ನಿರೀಕ್ಷಿಸಿ ಎಂದಿದ್ದಾರೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಇಡೀ ಕರ್ನಾಟಕವೇ ಜನಪರ ಬಜೆಟ್ ಅನ್ನು ನಿರೀಕ್ಷೆ ಮಾಡಬಹುದು. ಅಲ್ಲದೆ, ಅಲ್ಲದೆ, ಸರ್ಕಾರದ ಅವಧಿ ಮುಗಿಯುತ್ತಾ ಬಂದಿರುವ ಹಿನ್ನೆಲೆ, ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಯೋಜನೆಗಳ ಪೈಕಿ, ಎಷ್ಟು ಯೋಜನೆಗಳು ಈಡೇರಿವೆ ಎಂಂಬುದನ್ನೂ ಬಜೆಟ್ ಸಮಯದಲ್ಲಿ ವರದಿ ನೀಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.