ಕರ್ನಾಟಕದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸೇರಿ 6 ಸಾಧಕರಿಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್.ಎಲ್.ಭೈರಪ್ಪ ಸೇರಿದಂತೆ 9 ಸಾಧಕರಿಗೆ ಪದ್ಮಭೂಷಣ ನೀಡಿ ಗೌರವಿಸಿದ್ದಾರೆ. ಶ್ರೀಶಾ ರಶೀದ್ ಅಹ್ಮದ್ ಖಾದ್ರಿ, ಎಸ್.ಸುಬ್ಬರಾಮನ್, ರಾಣಿ ರಾಚಯ್ಯ, ಮುನಿ ವೆಂಕಟಪ್ಪ ಸೇರಿ 91 ಮಂದಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿ ಆದೇಶಿಸಿದೆ.
2023ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ವರ್ಷದ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪುರಸ್ಕೃತರು ಇವರೇ
ಪದ್ಮವಿಭೂಷಣ ಪುರಸ್ಕೃತರು:
ಬಾಲಕೃಷ್ಣ ಧೋಷಿ, ಮುಲಾಯಂ ಸಿಂಗ್ ಯಾದವ್, ದಿಲೀಪ್ ಮಹಾಲನಬಿಸ್ (ಔಷಧ), ಝಾಕಿರ್ ಹುಸೇನ್, ಎಸ್.ಎಂ.ಕೃಷ್ಣ, ಶ್ರೀನಿವಾಸ್ ವರ್ಧನ್.
ಪದ್ಮಭೂಷಣ ಪುರಸ್ಕೃತರು:
ದೀಪಕ್ ಧಾರ್, ವಾಣಿ ಜಯರಾಮ್, ಸ್ವಾಮಿ ಚಿನ್ನ ಜೀಯರ್, ಕಪಿಲ್ ಕಪೂರ್, ಕಮಲೇಶ್ ಡಿ.ಪಟೇಲ್, ಸುಧಾಮೂರ್ತಿ, ಕುಮಾರ ಮಂಗಳಂ ಬಿರ್ಲಾ,
ಪದ್ಮಶ್ರೀ ಪುರಸ್ಕೃತರು:
ಶ್ರೀಶಾ ರಶೀದ್ ಅಹ್ಮದ್ ಖಾದ್ರಿ, ಎಸ್.ಸುಬ್ಬರಾಮನ್, ರಾಣಿ ರಾಚಯ್ಯ, ಖಾದರ್ ವಲ್ಲಿ ದೂದೇಕುಲ, ಪಿಂಡಿಪನಹಳ್ಳಿ ಮುನಿ ವೆಂಕಟಪ್ಪ, ರತನ್ ಚಂದ್ರಶೇಖರ್ – ಪದ್ಮಶ್ರೀ (ವೈದ್ಯಕೀಯ), ಹೀರಾಬಾಯಿ ಲೋಬಿ (ಸಮಾಜ ಸೇವೆ), ಮುನೀಶ್ವರ್ ಚಂದ್ರದಾವರ್ (ವೈದ್ಯಕೀಯ), ವಡಿವೇಲ್ ಗೋಪಾಲ್, ಮಾಸಿ ಸೈದಯನ್ (ಸಮಾಜ), ರಾಮ್ಕ್ವಾಂಬೆ ನೆವ್ವೆ (ಸಮಾಜ ಸೇವೆ), ಅಪ್ಪುಕುಟ್ಟನ್ ಪೊದುವಾಲ್ (ಸಮಾಜ ಸೇವೆ) ಪದ್ಮಶ್ರೀ ಘೋಷಿಸಲಾಗಿದೆ.