ನೈಜೀರಿಯಾದಲ್ಲಿ ದೊಡ್ಡ ದುರಂತವೊಂದು ನಡೆದಿದ್ದು, ಸೆಂಟ್ರಲ್ ನೈಜಿರಿಯಾದ ನಸರವಾ ಮತ್ತು ಬೆನ್ಯೂ ಸ್ಟೇಟ್ ನಡುವೆ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, 54 ಜನರ ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಬಾಂಬ್ ಬ್ಲಾಸ್ಟ್ ಬಗ್ಗೆ ಸರ್ಕಾರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ರಾಯ್ಟರ್ಸ್ ವರದಿ ಪ್ರಕಾರ, ಮನುಷ್ಯರ ಜೊತೆ ನೂರಾರು ಸಾಕು ಪ್ರಾಣಿಗಳು ಕೂಡ ಈ ಘಟನೆಯಲ್ಲಿ ಜೀವ ಕಳೆದುಕೊಂಡಿವೆ. ಘಟನೆ ಬಗ್ಗೆ ನೈಜಿರಿಯಾ ಅಧ್ಯಕ್ಷ ಅಬ್ದುಲ್ಲ ಸುಲೇ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿ ತನಿಖೆಗೆ ಸೂಚಿಸಿದ್ದಾರೆ.
ನೈಜೀರಿಯಾ ಸರ್ಕಾರದ ವಕ್ತಾರರು ಮತ್ತು ರಾಷ್ಟ್ರೀಯ ಜಾನುವಾರು ಸಾಕಣೆದಾರರ ಪ್ರತಿನಿಧಿಯು ಸತ್ತವರಲ್ಲಿ ಹೆಚ್ಚಿನವರು ಜಾನುವಾರುಗಳನ್ನು ಮೇಯಿಸಲು ಹೋದವರು ಎಂದು ತಿಳಿಸಿದ್ದಾರೆ
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ