ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ಅಬ್ಬರ ಜೋರಾಗಿದ್ದು, ಈ ತಿಂಗಳು ಅಂತ್ಯದವರೆಗೆ ರಾಜ್ಯಾದ್ಯಂತ ಚಳಿಯ ವಾತಾವರಣ ಇರಲಿದ್ದು, ನಂತರ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದರ ಮಧ್ಯೆ ರಾಜ್ಯದಲ್ಲಿ ಶೀತಗಾಳಿಯ ಎಚ್ಚರಿಕೆ ಸಹ ನೀಡಲಾಗಿದ್ದು ದಕ್ಷಿಣ ಒಳನಾಡು, ಮತ್ತು ಉತ್ತರ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಇನ್ನೂ 2-3 ದಿನಗಳ ಕಾಲ ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಜನವರಿ 19ರ ವರೆಗೆ ಕನಿಷ್ಠ ತಾಪಮಾನ ಇರಲಿದೆ ಎಂದು ಹವಾನಮಾನ ಇಲಾಖೆ ತಿಳಿಸಿದೆ.
ಇನ್ನು, ರಾಜ್ಯದಲ್ಲಿ ಕೆಲವೇ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ದಾಖಲಾಗಿದ್ದು, ಬಾಗಲಕೋಟೆಯಲ್ಲಿ 9, ಮೈಸೂರಿನಲ್ಲಿ 9.7, ಚಾಮರಾಜನಗರದಲ್ಲಿ 10.9, ಚಿಕ್ಕಮಗಳೂರಿನಲ್ಲಿ 11.6, ದಾವಣಗೆರೆಯಲ್ಲಿ 12 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಚಳಿ ಜ್ವರ, ನೆಗಡಿ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾರಣ ಎಂಬುದು ತಜ್ಞರ ಅಭಿಪ್ರಾಯ.