ರಾಗಿ ಸೇವನೆಯಿಂದ ಆಗುವ ಪ್ರಯೋಜನಗಳು:
ರಾಗಿ ಅನೇಕ ರೋಗಗಳಿಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುವುದಲ್ಲದೆ, ಇದು ಅತ್ಯುತ್ತಮ ಪೌಷ್ಠಿಕ ಆಹಾರವೂ ಆಗಿದೆ.
ರಾಗಿಯನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಇಳಿಕೆಗೂ ಸಹಕಾರಿ. ರಾಗಿಯಲ್ಲಿರುವ ಪ್ರೊಟೀನ್ ಕೂಡ ತೂಕ ಇಳಿಕೆಗೆ ಕಾರಣ.
ಇನ್ನು ಚಳಿಗಾಲದಲ್ಲಿ ಕಾಡುವ ಕೀಲುನೋವುಗಳಿಗೆ ಇದರ ಹಿಟ್ಟಿನ ಮಾಲ್ಟ್ ಉತ್ತಮವಾಗಿದ್ದು, ರಾಗಿ ಹಿಟ್ಟಿನ ರೊಟ್ಟಿ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಮಧುಮೇಹ ಇರುವವರು ರಾಗಿ ಸೇವಿಸುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
ಇದು ದೇಹಕ್ಕೆ ವಿಟಮಿನ್ ಡಿ ಪೋಷಕಾಂಶ ನೀಡುತ್ತದೆ.
ರಾಗಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿದ್ದು, ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ. ಮತ್ತು ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸುತ್ತೆ.
ಇದಲ್ಲದೆ, ನಿತ್ಯ ರಾಗಿಯನ್ನು ಸೇವಿಸಿದರೆ ದೇಹದಲ್ಲಿ ಕೊಬ್ಬು ಹೆಚ್ಚಾಗುವ ಸಮಸ್ಯೆ ಇರುವುದಿಲ್ಲ. ನೀವೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಬೆಳಗ್ಗೆ ರಾಗಿಯನ್ನು ಸೇವಿಸುವುದು ಉತ್ತಮ.