ಮುಂದಿನ ವಾರ ದೇಶದ ರೈತರಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದ್ದು, PM ಕಿಸಾನ್ ಯೋಜನೆಯ 13 ನೇ ಕಂತಿಗನ ಹಣವನ್ನು ಕೇಂದ್ರ ಸರ್ಕಾರ ಜನವರಿ 23, 2023 ರಂದು ಬಿಡುಗಡೆ ಮಾಡಬಹುದು ಅನ್ನುವ ಬಗ್ಗೆ ವರದಿಯಾಗಿದೆ.
ಮತ್ತೊಂದೆಡೆ, ಕೆಲವು ರೈತರಿಗೆ 12 ನೇ ಕಂತಿನ ಸ್ಥಗಿತಗೊಂಡ ಹಣವನ್ನು ಕೂಡ ಜೊತೆಗೆ ನೀಡುವ ಸಾಧ್ಯತೆ ಇದ್ದು,12 ಮತ್ತು 13 ನೇ ಕಂತಿನ ಒಟ್ಟು ಹಣ 4000 ರೂ ನೇರವಾಗಿ ಅಕೌಂಟ್‌ಗೆ ಜಮೆಯಾಗಬಹುದು. pmkisan.gov.in ಗೆ ಭೇಟಿ ನೀಡುವ ಮೂಲಕ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.