ಯುಪಿಐ ವಹಿವಾಟುಗಳನ್ನು ಮಾಡಲು ಮಿತಿಯನ್ನು ಸಹ ನಿಗದಿ ಪಡಿಸಲಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಒಂದು ಬಾರಿಗೆ ಯುಪಿಐ ಮೂಲಕ ಗರಿಷ್ಠ 2 ಲಕ್ಷ ರೂ ವಹಿವಾಟು ಮಾಡಬಹುದು.
ಇನ್ನು BHIM UPI ಸಹಾಯದಿಂದ ಒಂದು ವಹಿವಾಟಿನಲ್ಲಿ ಗರಿಷ್ಠ 1 ಲಕ್ಷ ರೂ, ಬ್ಯಾಂಕ್ ಖಾತೆಯಿಂದ ಒಂದು ದಿನದ ಮಿತಿ ಕೇವಲ 1 ಲಕ್ಷ ರೂ ಮಾಡಬಹುದು. HDFC ಬ್ಯಾಂಕ್ ಯುಪಿಐ ಸಹಾಯದಿಂದ ದಿನಕ್ಕೆ 10 ಬಾರಿ ಪಾವತಿ ಮಾಡಬಹುದು. ಅಂದರೆ 1 ಲಕ್ಷ ರೂ ಮೀರಬಾರದು.
ಆಧಾರ್ ನಂಬರ್ ಬಳಸಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ..?
ಸ್ಮಾರ್ಟ್ ಫೋನ್ ಇಲ್ಲದವರು & ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಬ್ಯಾಂಕ್/ ATMಗಳಿಗೆ ಹೋಗಲು ಸಾಧ್ಯವಾಗದ ಜನರು ಆಧಾರ್ ಸಂಖ್ಯೆಯನ್ನು ಬಳಸಿ ತಮ್ಮ ಬ್ಯಾಲೆನ್ಸ್ ಪರಿಶೀಲಿಸಬಹುದು. ಈಗ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಬಹುದು.
ಹಂತ 1: ಇದಕ್ಕಾಗಿ ನೀವು ಬ್ಯಾಂಕ್‌ಗೆ ರಿಜಿಸ್ಟರ್ ಆದ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ *99*99*1# ಅನ್ನು ಡಯಲ್ ಮಾಡಿ
ಹಂತ 2: 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ಟೈಪ್ ಮಾಡಿ ನಮೂದಿಸಿ.
ಹಂತ 3: ಪರಿಶೀಲನೆಗಾಗಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಮತ್ತೊಮ್ಮೆ ನಮೂದಿಸಿ.
ಹಂತ 4: ಆಗ ನಿಮಗೆ ಯುಐಡಿಎಐನಿಂದ ಫ್ಲಾಶ್ ಎಸ್ಎಂಎಸ್ ನೋಟಿಫಿಕೇಶನ್ ಬರುತ್ತದೆ.
ಹಂತ 5: ನೀವು ಪಡೆದ ನೋಟಿಫಿಕೇಶನ್‌ನಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ವಿವರ ಲಭ್ಯವಿರಲಿದೆ.