ದಾವಣಗೆರೆ : ಮೈಸೂರಿನ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದಲ್ಲಿ ಎರಡು ವರ್ಷದ ಅವಧಿಯ ಎಂ.ಟೆಕ್ ಇನ್ ಟೂಲ್ ಇಂಜಿನೀಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, 2022-23 ನೇ ಸಾಲಿನ ಎಂ.ಟೆಕ್ ಇನ್ ಟೂಲ್ ಇಂಜಿನೀಯರಿಗ್ ಕೋರ್ಸಗಾಗಿ ಸಿಇಟಿ ಬರೆದಿರುವ/ಬರೆಯದಿರುವ ಬಿ.ಇ-ಮೆಕ್ಯಾನಿಕ್/ಇಂಡಸ್ಟ್ರೀಯಲ್ ಪ್ರೋಡಕ್ಷನ್/ ಆಟೋಮೊಬೈಲ್/ಆಟೋಮೇಷನ್ ಮತ್ತು ರೋಬೋಟಿಕ್ಸ್ ಇಂಜಿನೀಯರಿಂಗ್‍ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಇನ್ನು,ಜಿಟಿಟಿಸಿಯಲ್ಲಿ ಪ್ರಾಯೋಗಿಕ ತರಬೇತಿ ಪಡೆಯುವುದಲ್ಲದೆ ತಂತ್ರಜ್ಞಾನದ ಪರಿಣಿತಿ ಮತ್ತು ಅನುಭವ ಪಡೆಯಬಹುದು ಹಾಗೆ ಕೈಕಾರಿಕ ಘಟಕವಿರುವುದರಿಂದ ವಿದ್ಯಾರ್ಥಿಗಳಿಗೆ ಸಿಎನ್‍ಸಿ ಯಂತ್ರದ ತರಬೇತಿ ಪಡೆದು ಸ್ವದ್ಯೋಗಿಗಳಾಗಬಹುದು ಮತ್ತು ಹೆಸರಾಂತ ಕೈಗಾರಿಕೆಗಳಲ್ಲಿ ಉದ್ಯೋಗವಕಾಶಗಳು ಲಭ್ಯವಾಗಲಿದ್ದು, ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗುವುದು ಹಾಗೂ ಉದ್ಯೋಗ ಖಾತರಿಯನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ 8762140256 ಮತ್ತು 9243989954ಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದೆಂದು ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ತಿಳಿಸಿದ್ದಾರೆ.