ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡಿದ್ದರೆ ಬೆಳ್ಳಿ ಬೆಲೆ ಯಾವುದೇ ಹೆಚ್ಚಳವಾಗದೆ ಯಥಾಸ್ಥಿತಿಯಲ್ಲಿದ್ದು, ಕರ್ನಾಟಕದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 220 ರೂ ಏರಿಕೆಯಾಗಿ 56,340(ನಿನ್ನೆ 56,120)ರೂ ಆಗಿದೆ.
ಹಾಗೆಯೇ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯೂ 200 ರೂ. ಹೆಚ್ಚಳವಾಗಿದ್ದು ರೂ.51,650(ನಿನ್ನೆ 51,450)ರೂ ಆಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಏರಿಕೆ ಕಾಣದೆ, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆಯು ರೂ.74,000 ಆಗಿದೆ.