ದಾವಣಗೆರೆ: ಜಿಲ್ಲೆಯ ಅತಿ ಸಣ್ಣ ವೃತ್ತಿಪರ ಕುಶಲಕರ್ಮಿಗಳಿಗಾಗಿ ಸಾಲ-ಸಹಾಯಧನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಕುಶಲಕರ್ಮಿಗಳು ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಂಡು ತಮ್ಮ ವೃತ್ತಿ/ಚಟುವಟಿಕೆಯನ್ನು ಮುಂದುವರೆಸಲು ವಾಣಿಜ್ಯ ಬ್ಯಾಂಕ್‍ಗಳು/ಸಹಕಾರ ಬ್ಯಾಂಕ್/ಪ್ರಾದೇಶಿಕ ಗ್ರಾಮೀಣ ಬಾಂಕ್ ರೂ.50000/-ಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು.
ಕಮ್ಮಾರಿಕೆ/ಬುಟ್ಟಿ ಹಣಿಯುವುದು/ಬಡಗಿತನ/ಗೋಲ್ಡ್ ಸ್ಮಿತ್(ಆಭರಣ ತಯಾರಿಕೆ)/ಕಲ್ಲಿನ ಕೆತ್ತನೆ/ಮರದ ಕೆತ್ತನೆ/ಕುಂಬಾರಿಕೆ/ಮಣ್ಣಿನ ವಿಗ್ರಹ ತಯಾರಿಕೆ/ಲೋಹದ ಕರಕುಶಲ/ಬೆತ್ತ ಮತ್ತು ಬಿದಿರು ಉತ್ಪನ್ನ ವಸ್ತುಗಳು/ಲಂಬಾಣಿ ಕಸೂತಿ/ಕಸೂತಿ/ಕಂಬಳಿ ನೇಯುವುದು/ಚಾಪೆ ಹಣೆಯುವುದು ವೃತ್ತಿಪರ ಕುಶಲಕರ್ಮಿಗಳಿಗೆ ಗರಿಷ್ಠ ರೂ.15000/- ಸಹಾಯಧನ ಸಾಲದ ಖಾತೆಗೆ ಜಮಾ ಮಾಡಲಾಗುವುದು.
ಅರ್ಜಿದಾರರು 18 ವರ್ಷ ವಯೋಮಾನದ ಮೇಲ್ಪಟ್ಟ ವೃತ್ತಿಪರ ಕುಶಲಕರ್ಮಿಗಳು ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜ.25 ರೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.