ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕು ಕಚೇರಿ ವ್ಯಾಪ್ತಿಯ ಭೂದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯ ಸರ್ವೇಯರ್ ಉದಯ್ ಚೌಧರಿ ಅವರನ್ನು ಸೋಮವಾರ ಈ-ಸ್ವತ್ತು ಅಳತೆ ಮಾಡಲು ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಹರಳಹಳ್ಳಿ ಗ್ರಾಮದ ದೇವೇಂದ್ರಗೌಡ ಎಂಬುವರು ತಮ್ಮ ಮನೆಯ ಈ-ಸ್ವತ್ತು ಮಾಡಲು ಅಳತೆಗಾಗಿ ಅರ್ಜಿ ಸಲ್ಲಿಸಿದ್ದು, ಈ ಕೆಲಸ ಮಾಡಲು ಉದಯ ಚೌಧರಿ 3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ರಾಷ್ಟ್ರಪತಿ ಮತ್ತು ಎನ್.ಎಚ್. ಆಂಜನೇಯ ಅವರು ಆರೋಪಿಯನ್ನು ಬಂಧಿಸಿದ್ದು,ತನಿಖೆ ಮುಂದುವರಿದಿದೆ. ಇನ್ನು, ಬಂಧಿತ ಸರ್ವೇಯರ್ ಉದಯ್ ಚೌಧರಿ ದಾವಣಗೆರೆಯ ಆವರಗೆರೆ ಟೀಚರ್ ಕಾಲೋನಿ ನಿವಾಸಿ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ