ಕೇರಳದ ಕಾಸರಗೋಡಿನಲ್ಲಿ ಬಿರಿಯಾನಿ ಸೇವಿಸಿ ವಿದ್ಯಾರ್ಥಿನಿ ಅಂಜುಶ್ರೀ ಸಾವನ್ನಪ್ಪಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆಕೆ ಇಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ಹೌದು, ಪೊಲೀಸರಿಗೆ ವಿದ್ಯಾರ್ಥಿನಿ ಅಂಜುಶ್ರೀ ಮನೆಯಲ್ಲಿ ಡೆತ್‌ನೋಟ್ ಸಿಕ್ಕಿದ್ದು ಮಾನಸಿಕ ಖಿನ್ನತೆ ಕಾರಣ ಉಲ್ಲೇಖಿಸಲಾಗಿದೆ. ಅಂಜು ಮೊಬೈಲ್ ಸರ್ಚ್ ಹಿಸ್ಟರಿಯಲ್ಲಿಯೂ ಇಲಿ ವಿಷದ ಹುಡುಕಾಟ ನಡೆಸಿರುವುದು ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.