ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಕರ್ನಾಟಕದಲ್ಲಿ 24 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 540 ರೂ ಏರಿಕೆಯಾಗಿ 54,700(ನಿನ್ನೆ 54,160)ರೂ ಆಗಿದೆ.
ಹಾಗೆಯೇ 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆಯೂ 500 ರೂ ಹೆಚ್ಚಾಗಿದ್ದು, ರೂ.50,150(ನಿನ್ನೆ 49,650)ರೂ. ಆಗಿದ್ದು, ಚೆನ್ನೈನಲ್ಲಿ 55,830 ರೂ. ಆಗಿದ್ದು, ಮುಂಬಯಿಯಲ್ಲಿ 54,650 ರೂ. ಆಗಿದ್ದರೆ, ಬೆಂಗಳೂರಿನಲ್ಲಿ 54,700 ರೂ. ಆಗಿದೆ.
ಇನ್ನು ಬೆಳ್ಳಿ ಬೆಲೆಯಲ್ಲಿ ಕೆಜಿಗೆ 2,200 ರೂ ಜಿಗಿತ ಕಂಡಿದ್ದು, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 74,700(ನಿನ್ನೆ 72,500)ಕ್ಕೆ ತಲುಪಿದೆ.