ಕೋವಿಡ್ ಪಿಡುಗು ವ್ಯಾಪಕವಾಗಿ ಆವರಿಸಿಕೊಂಡಿರುವ ಚೀನಾದಲ್ಲಿ ನಿಂಬೆ ಹಣ್ಣುಗಳಿಗೆ ಏಕಾಏಕಿ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ. ಇನ್ನು ನಿಂಬೆಹಣ್ಣಿನ ಬಳಕೆ ಹೆಚ್ಚಿಸಿಕೊಳ್ಳುವ ಮೂಲಕ ಕೋವಿಡ್ ನಿಂದ ಪಾರಾಗಲು ಹಾಗೂ ಜೀವ ಉಳಿಸಿಕೊಳ್ಳಲು ಚೀನಿಯರು ಮುಂದಾಗಿದ್ದಾರೆ.
ಹೌದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಚೀನಿಯರು ನಿಂಬೆ ಮೊರೆಹೋಗಿದ್ದಾರೆ. ಬಹುತೇಕ ವ್ಯಾಪಾರಿಗಳು ನಿಂಬೆಹಣ್ಣನ್ನು ಬೀಜಿಂಗ್ ಮತ್ತು ಶಾಂಘೈ ನಗರಗಳಿಗೆ ಕಳಿಸುತ್ತಿದ್ದಾರೆ. ಕೇವಲ ನಾಲ್ಕೈದು ದಿನಗಳಲ್ಲಿ ನಿಂಬೆಹಣ್ಣಿನ ಬೆಲೆ ಹಲವು ಪಟ್ಟು ಹೆಚ್ಚಾಗಿದೆ.
ಇನ್ನು, ನಿಂಬೆ ಜಾತಿಯದ್ದೇ ಆದ ಇತರ ಹಣ್ಣುಗಳ ಬೇಡಿಕೆ ಶೇ.900ರಷ್ಟು ಹೆಚ್ಚಾಗಿದೆ ಎಂದು ಇ-ಕಾಮರ್ಸ್ ಕಂಪನಿಯೊಂದು ಮಾಹಿತಿ ನೀಡಿದೆ. ಶೀತ- ಜ್ವರಕ್ಕೆ ಕೊಡುವ ಔಷಧಿಗಳ ಸಂಗ್ರಹವೂ ಹಲವು ನಗರಗಳಲ್ಲಿ ಮುಗಿದು ಹೋಗಿದೆ. ಹೀಗಾಗಿ ನಿಂಬೆಹಣ್ಣಿನ ಬಳಕೆ ಹೆಚ್ಚಾಗಿದೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ