ದೇಶೀಯ ಬುಲಿಯನ್ ಮಾರುಕಟ್ಟೆಯ ವಹಿವಾಟಿನಲ್ಲಿ ನಿನ್ನೆಯಂತೆ ಇಂದು ಕೂಡ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದ್ದು, ಕರ್ನಾಟಕದಲ್ಲಿ 24 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 110 ರೂ ಇಳಿಕೆಯಾಗಿ 54,050(ನಿನ್ನೆ 54,160)ರೂ. ಆಗಿದೆ.
ಹಾಗೆಯೇ 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆಯೂ 100 ರೂ. ಕಡಿಮೆಯಾಗಿದ್ದು, ರೂ.49,550(ನಿನ್ನೆ 49,650)ರೂ ಆಗಿದೆ. ಇನ್ನು, ಬೆಳ್ಳಿ ಬೆಲೆಯಲ್ಲಿ 200 ರೂ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 72,900(ನಿನ್ನೆ 73,100)ಕ್ಕೆ ತಲುಪಿದೆ.