ಚಿತ್ರ ರಂಗದಲ್ಲಿ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂಬುವುದನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ, ತಮ್ಮ ಜೀವನದಲ್ಲಾದ ಕರಾಳ ಮುಖವನ್ನು ಮರಾಠಿ, ಬಾಲಿವುಡ್ ನಟಿ ತೇಜಸ್ವಿನಿ ಪಂಡಿತ್ ಬಹಿರಂಗಪಡಿಸಿದ್ದಾರೆ.
ಹೌದು, ಇತ್ತೀಚೆಗಷ್ಟೇ ನಟಿ ತೇಜಸ್ವಿನಿ ಪಂಡಿತ್ ಅವರು ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಡೆದ ಕಹಿ ಅನುಭವಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, “2010-11ರಲ್ಲಿ ನಾನು ಪುಣೆಯಲ್ಲಿ ಕಾರ್ಪೋರೇಟರ್ ಒಬ್ಬರ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ಇದ್ದೆ. ಆಗ ನನ್ನ 2 ಚಿತ್ರಗಳು ಮಾತ್ರ ಬಿಡುಗಡೆಯಾಗಿದ್ದವು. ಒಮ್ಮೆ ನಾನು ಬಾಡಿಗೆ ಪಾವತಿಸಲು ಅಪಾರ್ಟ್ ಮೆಂಟ್ ಮಾಲೀಕರ ಬಳಿಗೆ ಹೋದಾಗ ತನ್ನ ಲೈಂಗಿಕ ಬಯಕೆ ತೀರಿಸುವಂತೆ ನೇರವಾಗಿ ಕೇಳಿದ್ದ.
ಹೌದು, ‘ನನಗೆ ಬಾಡಿಗೆ ಬೇಡ, ನನ್ನೊಂದಿಗೆ ಸಮಯ ಕಳಿ’ ಎಂದು ಕೇಳಿದ್ದ. ನಾನು ಕೋಪಗೊಂಡು ಅವನ ಮುಖಕ್ಕೆ ನೀರು ಎರಚಿದ್ದೆ. ನನ್ನ ವೃತ್ತಿಯ ಕಾರಣಕ್ಕೆ ಆತ ನನ್ನನ್ನು ಆ ದೃಷ್ಟಿಯಲ್ಲಿ ನೋಡಿದ್ದ. ಈ ಘಟನೆ ನನಗೆ ಪಾಠವಾಯಿತು’ ಎಂದು ನಟಿ ತೇಜಸ್ವಿನಿ ಪಂಡಿತ್ ಹೇಳಿಕೊಂಡಿದ್ದಾರೆ.