ಕಳೆದ ಕೆಲ ದಿನಗಳಿಂದ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಜನವರಿ 1, 2023 ರಿಂದ 2,000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಲಿದೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ಪಿಐಬಿ ಸತ್ಯಾಸತ್ಯತೆ ಪರಿಶೀಲನೆ ತಂಡ ಸ್ಪಷ್ಟನೆ ನೀಡಿದೆ.
ಹೌದು, ಜನವರಿ 1 ರಿಂದ ಆರ್ಬಿಐ ಹೊಸ ರೂ.1000 ನೋಟುಗಳನ್ನು ಪರಿಚಯಿಸಲಿದೆ ಮತ್ತು ರೂ.2000 ನೋಟುಗಳನ್ನು ಬ್ಯಾನ್ ಮಾಡಲಿದೆ ಎಂಬ ಸುದ್ದಿ ಸುಳ್ಳು. ಯಾರು ಈ ರೀತಿಯ ಸುದ್ದಿಗಳನ್ನು ನಂಬಬೇಡಿ ಮತ್ತು ಈ ತರಹದ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ ಎಂದು ಪಿಐಬಿ ಪರಿಶೀಲನೆ ತಂಡ ಹೇಳಿದೆ.