ಪ್ರಸ್ತುತ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿರುವವರ ಸಂಖ್ಯೆ ಹೆಚ್ಚು. ಸಾಮಾಜಿಕ ಮಾಧ್ಯಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಬಳಕೆ ಹಲವರಿಗೆ ಚಟವಾಗಿ ಪರಿಣಮಿಸಿದ್ದು, ಇವುಗಳನ್ನು ತ್ಯಜಿಸುವುದು ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಕಷ್ಟ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಸಮೀಕ್ಷೆ ಪ್ರಕಾರ, ಜಾಲತಾಣಗಳ ಗೀಳಿನಿಂದ ಹೊರಬರುವುದು ಹುಡುಗರಿಗಿಂತ, ಹುಡುಗಿಯರಿಗೇ ತುಂಬಾ ಕಷ್ಟವಂತೆ. ಹದಿಹರೆಯದವರಲ್ಲಿ ಶೇ.75ರಷ್ಟು ಬಾಲಕರು, ಶೇ.85ರಷ್ಟು ಮಂದಿ ಬಾಲಕಿಯರು ಸಾಮಾಜಿಕ ಜಾಲತಾಣಗಳಿಂದ ಹೊರಬರುವುದು ಕಷ್ಟ ಎಂದಿದ್ದಾರೆ.
15ರಿಂದ 17 ವರ್ಷ ವಯಸ್ಸಿನರ ಪೈಕಿ ಪ್ರತಿ ಹತ್ತು ಮಂದಿಯಲ್ಲಿ ಆರು ಮಂದಿ ಸಾಮಾಜಿಕ ಮಾಧ್ಯಮದಿಂದ ಹೊರಗುಳಿಯುವುದು ತುಂಬಾ ಕಷ್ಟಕರ ಎಂಬ ಅಭಿಪ್ರಾಯ ನೀಡಿದ್ದಾರೆ. ಹುಡುಗರಿಗಿಂತ ಹುಡುಗಿಯರೇ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ತಲ್ಲೀನರಾಗಿದ್ದಾರೆ ಎನ್ನಲಾಗಿದೆ.