ವಾಹನ ವಿಮೆ ನಿಯಮಗಳು ಬದಲಾಗಲಿದ್ದು, ಈ ನಿಟ್ಟಿನಲ್ಲಿ ಭಾರತದ ವಿಮಾ ನಿಯಂತ್ರಕ IRDAI ಹೊಸ ಪ್ರಸ್ತಾವನೆಗಳನ್ನು ಮುಂದಿಟ್ಟಿದೆ. ಇದರ ಪ್ರಕಾರ ಸಾಮಾನ್ಯ ವಿಮಾ ಕಂಪನಿಗಳು ಒಟ್ಟು ಮೊತ್ತದ ಪ್ರೀಮಿಯಂ ವಿಧಿಸುವ ಮೂಲಕ ಕಾರುಗಳಿಗೆ ಮೂರು ವರ್ಷ ಮತ್ತು ಬೈಕ್ಗಳಿಗೆ ಐದು ವರ್ಷಗಳ ಪೂರ್ಣ ವಿಮಾ ಪಾಲಿಸಿಯನ್ನು ನೀಡಬಹುದು.
ಇಲ್ಲಿಯವರೆಗೆ, ವಿಮಾ ಕಂಪನಿಗಳು ಕಾರುಗಳಿಗೆ ಮೂರು ವರ್ಷ ಮತ್ತು ದ್ವಿಚಕ್ರ ವಾಹನಗಳಿಗೆ ಐದು ವರ್ಷಗಳ ಥರ್ಡ್ ಪಾರ್ಟಿ ವಿಮಾ ಪಾಲಿಸಿಗಳನ್ನು ನೀಡುತ್ತಿವೆ. ಒಂದು ವರ್ಷದ ಮೋಟಾರು ವಿಮಾ ಪಾಲಿಸಿಗಳಿಗೆ ಅನ್ವಯವಾಗುವ ನೋ-ಕ್ಲೈಮ್ ಬೋನಸ್ (NCB) ಸೌಲಭ್ಯವು ದೀರ್ಘಾವಧಿಯ ಮೋಟಾರು ವಿಮಾ ಪಾಲಿಸಿಗಳಿಗೂ ಅನ್ವಯಿಸುತ್ತದೆ.