ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ GPay, PhonePe, Paytm ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, GPay, PhonePe, Amazon Pay ಮತ್ತು Paytm ಕಂಪನಿಗಳ ದಿನದ ವಹಿವಾಟುಗಳಿಗೆ ಮಿತಿಯನ್ನು ನಿಗದಿಪಡಿಸಿದ್ದು, ಈ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
GPay, PhonePe, Amazon Pay ಮತ್ತು Paytm ಕಂಪನಿಗಳ ದಿನದ ವಹಿವಾಟುಗಳಿಗೆ ಮಿತಿಯನ್ನು ನಿಗದಿಪಡಿಸಿದ್ದು, PhonePe ಮೂಲಕ ನಿತ್ಯ 1,00,000 ರೂ.ವರೆಗೆ ಗರಿಷ್ಠ 10-20 ವಹಿವಾಟುಗಳನ್ನು ನಡೆಸಬಹುದು. GPayನಲ್ಲಿ ಒಂದು ಲಕ್ಷ ರೂ.ವರೆಗೆ ಪ್ರತಿದಿನ 10 ವಹಿವಾಟುಗಳ ಮಿತಿ ನಿಗದಿಗೊಳಿಸಲಾಗಿದೆ. Paytmನಲ್ಲಿ ಪ್ರತಿದಿನ 20 ವಹಿವಾಟು (ಗಂಟೆಗೆ ಗರಿಷ್ಠ 5) ನಡೆಸಬಹುದಾಗಿದೆ.