ದೇಶದ ಲಕ್ಷಾಂತರ BSNL ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದ್ದು, ಮುಂದಿನ ಐದರಿಂದ ಆರು ತಿಂಗಳಲ್ಲಿ 4G ತಂತ್ರಜ್ಞಾನವನ್ನು 5G ಗೆ BSNL ಅಪ್‌ಗ್ರೇಡ್ ಮಾಡಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬಹಿರಂಗಪಡಿಸಿದ್ದಾರೆ.
BSNL ದೇಶದ ಯಾವುದೇ ಟೆಲಿಕಾಂ ಕಂಪನಿಗಳಿಗಿಂತ ಭಿನ್ನವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾದ ನೆಟ್ವರ್ಕ್ ಅನ್ನು ಹೊಂದಿದೆ. ಟೆಲಿಕಾಂ ತಂತ್ರಜ್ಞಾನ ಅಭಿವೃದ್ಧಿ ನಿಧಿ 500ರಿಂದ 4,000 ಕೋಟಿ ರೂ.ಗೆ ಹೆಚ್ಚಿಸಲಾಗುವುದು.
ಇನ್ನು, BSNL 1.35 ಲಕ್ಷ ಮೊಬೈಲ್ ಟವರ್ ಹೊಂದಿದ್ದು, ಟವರ್‌ಗಳನ್ನು 5G ಗೆ ಪರಿವರ್ತಿಸುತ್ತೇವೆ. 5ಜಿ ಪರೀಕ್ಷೆಗಾಗಿ ಬಿಎಸ್‌ಎನ್‌ಎಲ್ ಟಿಸಿಎಸ್ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ’ ಎಂದು ಸಚಿವರು ಹೇಳಿದರು.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ