ಅಮೃತ ಸ್ವಾಭಿಮಾನಿ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ನೀಡಿದ್ದು, ಈ ಯೋಜನೆಗೆ 354.50 ಕೋಟಿ ರೂ ಮೀಸಲಿರಿಸಿದ್ದು, ಒಬ್ಬ ಕುರಿಗಾಹಿಗೆ 20 ಕುರಿ, ಒಂದು ಮೇಕೆ ನೀಡಲಾಗುತ್ತದೆ.
ಇನ್ನು, ಅಮೃತ ಸ್ವಾಭಿಮಾನಿ ಯೋಜನೆಯಡಿ ಘಟಕವೊಂದಕ್ಕೆ 1.75 ಲಕ್ಷ ರೂ ನೆರವು ನೀಡಲಾಗುತ್ತದೆ. ಇಂತಹ 20,000 ಘಟಕಗಳನ್ನು ತೆರೆಯಲಾಗುವುದು. ನೆರವಿನಲ್ಲಿ 50% ಕೇಂದ್ರ ಸರ್ಕಾರದ್ದಾಗಿದ್ದು, 25% ರಾಜ್ಯ ಸರ್ಕಾರ ಭರಿಸಲಿದೆ. ಶೇ.25ರಷ್ಟನ್ನು ಫಲಾನುಭವಿಗಳೇ ಹಾಕಿಕೊಳ್ಳಬೇಕಿದೆ. ಇದಕ್ಕೆ ಕುರಿ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘಗಳ ಸದಸ್ಯರು ಅರ್ಹರು.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ