ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ರೈತರಿಗೆ ಭರ್ಜರಿ ಉಡುಗೊರೆ ನೀಡಿದ್ದು, ರಾಜ್ಯದ 32 ಲಕ್ಷ ರೈತರಿಗೆ 24,000 ಕೋಟಿ ಸಾಲ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕಲಬುರಗಿಯಲ್ಲಿ ನಡೆದ ಸಹಕಾರ ಸಪ್ತಾಹದಲ್ಲಿ ಘೋಷಿಸಿದ್ದಾರೆ.
ಕಲಬುರಗಿಯ ಸೇಡಂನಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ಸರ್ಕಾರ ರೈತರ ಪರವಾಗಿದ್ದು, ರೈತರಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ರಾಜ್ಯದ 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂಪಾಯಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. 45 ಕೋ.ರೂ ವೆಚ್ಚದಲ್ಲಿ ಎಲ್ಲಾ ಸಹಕಾರ ಬ್ಯಾಂಕ್ ಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈ ಮೂಲಕ ರೈತರಿಗೆ ಖಾತೆಗೆ ನೇರವಾಗಿ ಹಣ ತಲುಪಲಿದೆ ಎಂದರು.
ಇನ್ನು, ರೈತರ ಬದುಕು ಹಸನಾಗಬೇಕಾದರೆ, ಬೆಳೆಗೆ ಉತ್ತಮ ದರ ಸಿಗಬೇಕು. ಆ ಮೂಲಕ ರೈತ ಸ್ವಾವಲಂಬಿ ಆಗಬೇಕು. ಹಾಗಾಗಿ, ರೈತರಿಗೆ ಅಲ್ಪಾವಧಿಯ ಸಾಲ ವಿತರಣೆಯಾಗಬೇಕು. ನಮ್ಮ ಸರ್ಕಾರವು ಬಿಜೆಪಿ ರೈತರ ಅಭಿವೃದ್ಧಿಗಾಗಿ ಈ ಸಾಲ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಹೇಳಿದ್ದಾರೆ.