ಸುಳ್ಳು ಮಾಹಿತಿ ನೀಡಿ ಪಡೆದ 10 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ದೇಶಾದ್ಯಂತ ಗುರುತಿಸಿರುವ ಸುಮಾರು 10 ಲಕ್ಷ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಸರ್ಕಾರ ಯೋಜನೆ ಹಾಕಿದೆ. ಈ ಪ್ರಕ್ರಿಯೆ ಮುಂದುವರಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಹೌದು, ದೇಶಾದ್ಯಂತ ಲಕ್ಷಾಂತರ ಪಡಿತರ ಚೀಟಿಗಳು ರದ್ದಾಗಲಿವೆ ಎಂದು ತಿಳಿದುಬಂದಿದ್ದು, ಅನೇಕರು ಅಕ್ರಮ ಪಡಿತರ ಚೀಟಿ ಹೊಂದಿರುವುದನ್ನು ಕೇಂದ್ರ ಪತ್ತೆಹಚ್ಚಿದ್ದು, ಅನರ್ಹ ಫಲಾನುಭವಿಗಳ ಕಾರ್ಡ್ಗಳನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಲು ಸರ್ಕಾರ ನಿರ್ದೇಶನ ನೀಡಿದೆ.
ಇನ್ನು, ಈ ಪಟ್ಟಿ ತಲುಪಿದ ನಂತರ ನಕಲಿ ಕಾರ್ಡ್ ಹೊಂದಿರುವವರಿಗೆ ಪಡಿತರ ಸ್ಥಗಿತವಾಗಲಿದೆ. ಅದಲ್ಲದೆ, 10 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು ಮತ್ತು 4 ತಿಂಗಳಿಂದ ಪಡಿತರ ತೆಗೆದುಕೊಳ್ಳದವರ ಕಾರ್ಡ್ಗಳು ಸಹ ರದ್ದಾಗಲಿವೆ ಎಂದು ಹೇಳಲಾಗಿದೆ. ದೇಶಾದ್ಯಂತ ಒಟ್ಟು 80ಕೋಟಿ ಬಿಪಿಎಲ್ ಕಾರ್ಡ್ದಾರರಿದ್ದಾರೆ.