ವಿಧಾನಸಭಾ ಚುನಾವಣೆಗೆ 6 ತಿಂಗಳು ಮಾತ್ರವೇ ಬಾಕಿ ಇದ್ದು, ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಬ್ಯಾಡಗಿಯಲ್ಲಿ ಮಹತ್ವದ ಯೋಜನೆ ಘೋಷಿಸಿದ್ದಾರೆ.
ಹೌದು, ರಾಜ್ಯದ ಪ್ರತಿಯೊಬ್ಬ ಕುರಿಗಾಹಿಗೆ ತಲಾ 20 ಕುರಿ, 1 ಮೇಕೆ ನೀಡುತ್ತೇವೆ. ಈ ಯೋಜನೆಗೆ ₹324 ಕೋಟಿ ಮೀಸಲಿಟ್ಟಿದ್ದೇವೆ. ಕುರಿಗಾಹಿಗಳು ಬಿಸಿಲು, ಮಳೆಗೆ ಸಿಲುಕಿ ನರಳುತ್ತಿದ್ದು, ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಈ ಯೋಜನೆಯನ್ನು ಜಾರಿಗೊಳಿಸಿ, ಅವರ ಜೀವನವನ್ನು ಹಸನು ಮಾಡಲು ನಮ್ಮ ಸರ್ಕಾರ ಪಣ ತೊಟ್ಟಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸಮರ್ಥನೆ ನೀಡಿದ್ದಾರೆ.