ಬಿಸಿ ನೀರು ಕುಡಿಯುವವರಿಗೆ ಆರೋಗ್ಯ ಸಮಸ್ಯೆಗಳು ಕಡಿಮೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹೌದು, ಕೆಮ್ಮು ಮತ್ತು ಶೀತದಿಂದ ಬಳಲುತ್ತಿರುವವರಿಗೆ ಬಿಸಿನೀರು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಅನಾರೋಗ್ಯದ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಏಕೆಂದರೆ ನೀವು ಬಿಸಿ ನೀರು ಕುಡಿದರೆ, ಹಾನಿಕಾರಕ ವೈರಸ್‌ಗಳು ಮತ್ತು ಸೂಕ್ಷ್ಮಜೀವಿಗಳು ನಿಮ್ಮ ದೇಹವನ್ನು ಸುಲಭವಾಗಿ ಪ್ರವೇಶಿಸುವುದಿಲ್ಲ. ಬಿಸಿ ನೀರು ಕುಡಿಯುವುದರಿಂದ ಮಲವು ಬೇಗನೆ ಶುಚಿಯಾಗುತ್ತದೆ. ಬಿಸಿನೀರು ತಲೆನೋವನ್ನು ಕಡಿಮೆ ಮಾಡುತ್ತದೆ.
ಬಿಸಿ ನೀರು ಸೇವನೆಯಿಂದ ಆಗುವ ಪ್ರಯೋಜನ?
ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ.
ಕೇಂದ್ರ ನರ ಮಂಡಲ ವ್ಯವಸ್ಥೆಯು ಸರಿಯಾಗುತ್ತದೆ.
ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ದೇಹಕ್ಕೆ ಅಗತ್ಯವಾದಷ್ಟು ನೀರಿನಾಂಶ ಲಭಿಸುತ್ತದೆ.
ಚಳಿಯಾಗುತ್ತಿರುವಾಗ ನಡುಗುವಿಕೆ ಕಡಿಮೆಯಾಗುತ್ತದೆ.
ರಕ್ತ ಸಂಚಾರ ಸುಗಮವಾಗುತ್ತದೆ.
ವಿಷಕಾರಿ ವಸ್ತುಗಳು ಬೆವರಿನ ರೂಪದಲ್ಲಿ ಹೊರಹೊಮ್ಮುತ್ತದೆ.
ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ.