ದೇಶದ ಚಿನಿವಾರ ಪೇಟೆಯಲ್ಲಿ ದೀಪಾವಳಿಯ ನಿಮಿತ್ತ ಚಿನ್ನದ ಮಾರಾಟ ಭರದಿಂದ ಸಾಗಿದ್ದು, ಮಂಗಳವಾರ ಬೆಳಗ್ಗೆ ಚಿನ್ನ, ಬೆಳ್ಳಿ ದರ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದೆ.
ಹೌದು, 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 47,010 ರೂ ಆಗಿದ್ದು, 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 51,290 ರೂ ದಾಖಲಾಗಿದ್ದು, 1 ಕೆಜಿ ಬೆಳ್ಳಿ ಬೆಲೆ 57,700 ರೂ ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 47,060 ರೂ ಇದ್ದು, 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 51,340 ರೂ ದಾಖಲಾಗಿದ್ದು,1 ಕೆಜಿ ಬೆಳ್ಳಿ ಬೆಲೆ 63,200 ರೂ ಆಗಿದೆ.
ಇನ್ನು, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ ಹೀಗಿದ್ದು, ಚೆನ್ನೈ- 47,410 ರೂ, ಮುಂಬೈ- 47,010 ರೂ, ದೆಹಲಿ- 47,150 ರೂ, ಕೊಲ್ಕತ್ತಾ- 47,010 ರೂ, ಹೈದರಾಬಾದ್- 47,010 ಇದೆ.