ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ ಎಲ್ಲಾ ರೈತರ ಖಾತೆಗೆ 12ನೇ ಕಂತಿನ ಹಣ ಜಮೆ ಮಾಡಿತ್ತು. ಆದ್ರೆ ಕೆಲವು ರೈತರಿಗೆ ಜಮೆ ಆಗಿಲ್ಲ. ಜಮೆ ಆಗದ ಹಣವನ್ನು ಅಕ್ಟೊಬರ್ 26ರ ಒಳಗೆ ಹಾಕಲಾಗುವುದು ಎಂದು ಕೇಂದ್ರ ಕೃಷಿ ಸಚಿವಾಲಯ ಪ್ರಕಟಿಸಿದೆ. ಹಾಗಾಗಿ ರೈತರ ಖಾತೆಗೆ ಇಂದು ರಾತ್ರಿ ಹಣ ಜಮೆ ಆಗಲಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಆರ್ಥಿಕವಾಗಿ ಸಹಾಯವಾಗಿ ಮೂರೂ ಕಂತುಗಳಲ್ಲಿ 2000 ರೂಗಳಂತೆ ವರ್ಷಕ್ಕೆ 6000 ರೂಗಳನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.
ಪಿಎಂ ಕಿಸಾನ್ ಯೋಜನೆಯಡಿ ರೈತರು ತಮ್ಮ ಹಣದ ಮಾಹಿತಿಯನ್ನು https://pmkisan.gov.in/ ವೆಬ್ಸೈಟ್ನಲ್ಲಿ ತಮ್ಮ ಆಧಾರ್ ಕಾರ್ಡ್ ನಂಬರ್ ನೋಂದಾಯಿಸಿ ಪರಿಶೀಲಿಸಬಹುದು.