ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ರೈತರ ಕೃಷಿಗಾರಿಕೆಗೆ ಸಹಾಯಾರ್ಥವಾಗಿ ಕೇಂದ್ರ ಸರ್ಕಾರ ಮೂರೂ ಕಂತುಗಳಲ್ಲಿ 2000 ರೂಗಳಂತೆ ವರ್ಷಕ್ಕೆ 6000 ರೂಗಳನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.
ಅದರಂತೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣ ರೈತರ ಖಾತೆಗೆ ವರ್ಗಾಯಿಸಲಾಗಿದ್ದು, ನೀವು ಕೆವೈಸಿ ತುಂಬಿದರೂ ಕಂತಿನ ಹಣ ಸಿಕ್ಕಿಲ್ಲವೆಂದರೆ ಕೆಲ ಮಾರ್ಗಗಳುಂಟು. ಹೌದು, ಇಂಥಹ ಸಮಸ್ಯೆಗಳಿಗೆ ಸಹಾಯವಾಣಿ ಪರಿಹಾರವಾಗಿ ದೂರವಾಣಿ ಇಮೇಲ್ ಕೊಡಲಾಗಿದ್ದು, ಪಿಎಂ ಕಿಸಾನ್ ನಂಬರ್ 18001155266, ಪಿಎಂ ಕಿಸಾನ್ ಸಹಾಯವಾಣಿ ನಂಬರ್ 155261,011-24300606, 0120-6025109, pmkisan-ict@gov.in ನಿಂದ ಮಾಹಿತಿ ಪಡೆಯಬಹುದು.