ಸುರಕ್ಷಿತ ಹೂಡಿಕೆ ಅಥವಾ ಉಳಿತಾಯದ ರೂಪದಲ್ಲಿ ಅಟಲ್ ಪಿಂಚಣಿ ಯೋಜನೆ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ಯೋಜನೆಯಲ್ಲಿ ಬದಲಾವಣೆಗಳನ್ನು ಸಹ ಮಾಡಲಾಗಿದ್ದು, ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ಪ್ರತ್ಯೇಕ ಖಾತೆಗಳನ್ನು ತೆರೆದು ಪ್ರತಿ ತಿಂಗಳು 10,000 ರೂಪಾಯಿ ಪಿಂಚಣಿ ಪಡೆಯಬಹುದು.
ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಆರಂಭವಾಗಿದ್ದು, ಆಗ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಈ ಯೋಜನೆಯನ್ನು ಆರಂಭಿಸಲಾಗಿತ್ತು. ನಂತರ ಈ ನಿಯಮವನ್ನು ಬದಲಾಯಿಸಲಾಯಿತು. ಬದಲಾದ ನಿಯಮದ ಅನ್ವಯ, 18 ರಿಂದ 40 ವರ್ಷದವರೆಗಿನ ಭಾರತೀಯ ನಾಗರಿಕರು, ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು, ಯೋಜನೆಯಲ್ಲಿ 60 ವರ್ಷಗಳ ನಂತರ ಪಿಂಚಣಿ ಪ್ರಾರಂಭವಾಗುತ್ತದೆ.
ಅಟಲ್ ಪಿಂಚಣಿ ಯೋಜನೆಯ ಲಾಭವನ್ನು 39 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡ ಮತ್ತು ಹೆಂಡತಿ ಪಡೆಯಬಹುದಾಗಿದ್ದು, 30 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಗಂಡ ಮತ್ತು ಹೆಂಡತಿಯಾಗಿದ್ದರೆ, ಅವರು APY ಖಾತೆಗೆ ಪ್ರತಿ ತಿಂಗಳು 577 ರೂ ಪಾವತಿಸಬೇಕು. ಗಂಡ ಮತ್ತು ಹೆಂಡತಿಯ ವಯಸ್ಸು 35 ವರ್ಷವಾಗಿದ್ದರೆ, ಪ್ರತಿ ತಿಂಗಳು ತಮ್ಮ APY ಖಾತೆಗೆ 902 ರೂಪಾಯಿಗಳನ್ನು ಪಾವತಿಸಬೇಕು.
ಇನ್ನು, ಖಾತರಿಪಡಿಸಿದ ಮಾಸಿಕ ಪಿಂಚಣಿ ಜೊತೆಗೆ ಸಂಗಾತಿಗಳಲ್ಲಿ ಒಬ್ಬರು ಮರಣಹೊಂದಿದರೆ, ಬದುಕಿರುವ ಸಂಗಾತಿಯು ಪ್ರತಿ ತಿಂಗಳು ಪಿಂಚಣಿಯೊಂದಿಗೆ 8.5 ಲಕ್ಷ ರೂ ಸಿಗಲಿದೆ. ಆದರೆ, ಈ ಯೋಜನೆಯಲ್ಲಿ ನಿಮಗೆ ಬೇಕಾದಾಗ ನಿಮ್ಮ ಹಣ ಹಿಂಪಡೆಯಲು ಸಾಧ್ಯವಿಲ್ಲ. ಬದಲಿಗೆ ಪಿಂಚಣಿ ರೂಪದಲ್ಲಿ ಹಣ ನಿಮ್ಮ ಕೈಸೇರಲಿದೆ.