ಸ್ಯಾಂಡಲ್ ವುಡ್ ಮೋಹಕ ತಾರೆ ನಟಿ ರಮ್ಯಾ ಅವರು ನಿರ್ದೇಶಕ ರಾಜ್ ಬಿ ಶೆಟ್ಟಿ ಜೊತೆಗೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ತಿಳಿದಿರುವುದೇ.
ಆದ್ರೆ ಇದೀಗ ಬಂದಿರುವ ಅಪ್‌ಡೇಟ್ ಪ್ರಕಾರ, ಇದ್ದಕ್ಕಿದ್ದಂತೆ ಸ್ಯಾಂಡಲ್‌ವುಡ್ ಕ್ವೀನ್ ರಾಜ್ ಬಿ ಶೆಟ್ಟಿ ನಿರ್ದೇಶನದ ಚಿತ್ರದಿಂದ ಹೊರ ಬಂದಿದ್ದಾರೆ. ಇನ್ನೇನು ಶೂಟಿಂಗ್‌ಗೆ ಕೆಲವೇ ದಿನಗಳು ಬಾಕಿ ಇರುವಾಗ ರಮ್ಯಾ ಈ ನಿರ್ಧಾರ ಮಾಡಿದ್ದು ಸಿನಿಮಾ ತಂಡಕ್ಕೆ ಶಾಕ್ ನೀಡಿದೆ.
ಆದ್ರೆ ಅವರು ಚಿತ್ರದ ನಿರ್ಮಾಪಕಿಯಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದ್ದು, ರಮ್ಯಾ ಬದಲು ನಟಿ ಸಿರಿ ರವಿ ಕುಮಾರ್‌ಗೆ ಆಫರ್ ನೀಡುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ರಮ್ಯಾ ಈ ನಿರ್ಧಾರಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.