ಸುಮಾರು 27 ವರ್ಷಗಳ ಬಳಿಕ ದೀಪಾವಳಿಯ ದಿನದಂದು ಸೂರ್ಯಗ್ರಹಣ ಸಂಭವಿಸಲಿದೆ. 1995ರಲ್ಲಿ ದೀಪಗಳ ಹಬ್ಬದ ದಿನ ಸೂರ್ಯಗ್ರಹಣ ಸಂಭವಿಸಿತ್ತು. ಕಾರ್ತಿಕ ಮಾಸದ ಅಮಾವಾಸ್ಯೆ ದಿನ ಹಬ್ಬದ ಜೊತೆಗೆ ಸಂಭವಿಸುವ ಈ ಸೂರ್ಯಗ್ರಹಣ ಬಹಳ ವಿಶಿಷ್ಟವಾದದ್ದು ಎಂದು ವಿದ್ವಾಂಸರು ಹೇಳಿದ್ದಾರೆ.
ಇನ್ನು, ಮೇಷ, ವೃಷಭ, ಮಿಥುನ, ಕರ್ಕಾಟಕ ಮತ್ತು ಸಿಂಹ ರಾಶಿಯಲ್ಲಿ ಜನಿಸಿದವರ ಮೇಲೆ ಅಡ್ಡಪರಿಣಾಮಗಳು ಹೆಚ್ಚಿವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಗ್ರಹಣದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದೆ ಎಂಬುದು ಹಲವರ ವಾದವಾಗಿದೆ.