ಹರಪನಹಳ್ಳಿ: ಹರಪನಹಳ್ಳಿ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ( Maintenance work ) ಕಾಮಗಾರಿ ಹಮ್ಮಿಕೊಂಡಿರುವ ಹಿನ್ನಲೆ ಹರಪನಹಳ್ಳಿ ಪಟ್ಟಣ ಮತ್ತು ಗ್ರಾಮಂತರ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.
ಹರಪನಹಳ್ಳಿ ಪಟ್ಟಣದ ಕುರುಬಗೆರೆ, ಐ.ಬಿ.ವೃತ್ತ, ಹೊಸಪೇಟೆ ರಸ್ತೆ, ಆಚಾರ್ಯ ಲೇಔಟ್, ಬಾಣಗೆರೆ, ಕೊಟ್ಟೂರು ರಸ್ತೆ ದೇವರ ತಿಮಲಾಪುರ ಮತ್ತು ಗ್ರಾಮಂತರ ಪ್ರದೇಶಗಳಾದ ಕಡಬಗೆರೆ, ಬಾಗಳಿ, ಕುಮಾರನಹಳ್ಳಿ, ಕೊಡಿಹಳ್ಳಿ, ಕಾನಹಳ್ಳಿ, ನಿಚ್ಚಾಪುರ, ಅಡವಿಹಳ್ಳಿ, ಅನಂತನಹಳ್ಳಿ, ಗೌರಿಹಳ್ಳಿ, ಹರಕನಹಾಳು, ಯಲ್ಲಮರ, ಕೂಲಹಳ್ಳಿ ಮತ್ತು ಸುತ್ತಾಮುತ್ತಾ ಗ್ರಾಮಗಳ ಪ್ರದೇಶದಲ್ಲಿ ಇಂದು ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿರುವುದರಿಂದ ವಿದ್ಯುತ್ ಬಳಕೆದಾರರು ಸಹಕರಿಸಲು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.