ವಾಟ್ಸಪ್‌ನಂತೆಯೇ ಕಾರ್ಯನಿರ್ವಹಿಸುವ ಫೇಕ್ ಅಥವಾ ಮೋಡಿಫೈಡ್ ವಾಟ್ಸಪ್‌ಗಳು ಸಾಕಷ್ಟಿವೆ. ಅವುಗಳನ್ನು ಬಳಸದಂತೆ ವಾಟ್ಸಪ್ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದು, ಈಗ ಆಘಾತಕಾರಿ ವಿಚಾರವೊಂದು ಬಯಲಾಗಿದೆ. ಫೇಕ್ ವಾಟ್ಸಪ್ ಬಳಸುವ ಗ್ರಾಹಕರನ್ನು ಹ್ಯಾಕರ್‌ಗಳು ಗುರಿಯಾಗಿಸುತ್ತಿದ್ದಾರೆ.
ಹೌದು. ಫೇಕ್ ಅಥವಾ ಮೋಡಿಫೈಡ್ ವಾಟ್ಸಪ್‌ಗಳನ್ನು ಬಳಸಿ ಹ್ಯಾಕರ್‌ಗಳು ಗ್ರಾಹಕರ ವೈಯಕ್ತಿಕ ಮತ್ತು ಖಾಸಗಿ ಮಾಹಿತಿಯನ್ನು ಕದಿಯುತ್ತಾರೆ ಎಂಬುದು ಗೊತ್ತಾಗಿದ್ದು, ಯೋ ವಾಟ್ಸಪ್, ಎಫ್‌ಎಂ ವಾಟ್ಸಪ್ ಮತ್ತು ಜಿಬಿ ವಾಟ್ಸಪ್ ಫೇಕ್ ವಾಟ್ಸಪ್‌ಗೆ ಉದಾಹರಣೆಗಳು.