ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣ ಇದೇ 17ರಂದು ರೈತರ ಖಾತೆಗೆ ಜಮಾ ಆಗುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಬಾರಿ ಮಳೆಯಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿರುವ ರೈತರು ಈ ಕಂತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸ್ಟೇಟಸ್ ತಿಳಿಯಲು pmkisan.gov.in ಲಾಗಿನ್ ಆಗಿ ‘ಫಾರ್ಮರ್ಸ್ ಕಾರ್ನರ್’ ಆಪ್ಶನ್ ಮೇಲೆ ಕ್ಲಿಕ್ಕಿಸಿ. ನಂತರ ‘ಬೆನೆಫಿಸಿಯರಿ ಸ್ಟೇಟಸ್’ ಮೇಲೆ ಕ್ಲಿಕ್ ಮಾಡಿ, ಕೇಳುವ ಮಾಹಿತಿಯನ್ನು ಒದಗಿಸುವ ಮೂಲಕ ನಿಮ್ಮ ಸ್ಟೇಟಸ್ ತಿಳಿಯಬಹುದು.
ಇನ್ನು, ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ವಾರ್ಷಿಕವಾಗಿ 2000 ರೂಗಳಂತೆ ಮೂರೂ ಕಂತುಗಳಲ್ಲಿ ರೈತರಗೆ ₹6000 ನೀಡುತ್ತಿದೆ.