ರಕ್ತ ಹೀನತೆಯನ್ನು ನಿಯಂತ್ರಣ ಮಾಡಲು ಇಲ್ಲಿದೆ ಕೆಲವು ಆಹಾರಕ್ರಮಗಳು:
ಇತ್ತಿಚೀನ ದಿನಗಳಲ್ಲಿ 3 ಪೋಷಕಾಂಶಯುಕ್ತ ಆಹಾರ ಸೇವನೆಯ ಕೊರತೆಯಿಂದ ಅನೇಕ ಮಹಿಳೆಯರು, ಮಕ್ಕಳು. ಗರ್ಭಿಣಿಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಆಹಾರಕ್ರಮದಲ್ಲಿ ಪೌಷ್ಟಿಕಾಂಶವಿರುವ ಆಹಾರ ಸೇವಿಸುವುದು ಉತ್ತಮ.
ಪ್ರತಿದಿನ ಒಂದು ಕಪ್ ಮೊಸರಿಗೆ ಸಕ್ಕರೆ ಹಾಗೂ ಅರ್ಧ ಚಮಚ ಅರಿಶಿನವನ್ನು ಸೇರಿಸಿ ಸೇವನೆ ಮಾಡುವುದರಿಂದ ರಕ್ತದ ಉತ್ಪಾದನೆ ಉತ್ತಮವಾಗುತ್ತದೆ. ಇದರೊಂದಿಗೆ ದೇಹ ಕೂಡ ತಂಪಾಗಿರುತ್ತದೆ.
ಎಳ್ಳನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣಾಂಶ ಹೆಚ್ಚಾಗುತ್ತದೆ. ಕಪ್ಪು ಎಳ್ಳನ್ನು ಎರಡು ಮೂರು ಗಂಟೆಗಳ ಕಾಲ ಸ್ವಲ್ಪ ನೀರಿನಲ್ಲಿ ನೆನೆಸಿ ನಂತರ ಅವುಗಳನ್ನು ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಂಡು ಪ್ರತಿದಿನ ಒಂದು ಚಮಚ ಜೇನುತುಪ್ಪದೊಂದಿಗೆ ಸೇವಿಸುವುದು ತುಂಬಾ ಒಳ್ಳೆಯದು.
ಹಸಿರು ತರಕಾರಿ, ಬಿಟ್ರೋಟ್, ಕ್ಯಾರೆಟ್, ಸೌತೆಕಾಯಿ, ಪಾಲಕ್, ಸೆಲರಿ ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಲೋರೋಫಿಲ್ ಕಬ್ಬಿಣದ ಉತ್ತಮ ಮೂಲವಾಗಿದೆ ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಅಳವಡಿಸಿಕೊಂಡು ದಿನನಿತ್ಯ ಸೇವಿಸುವುದು ಉತ್ತಮ.