ತಂದೆಯ ಆಸ್ತಿಯಲ್ಲಿ ಎಲ್ಲಾ ಮಕ್ಕಳಿಗೂ ಸಮ ಭಾಗವಿದೆ. ಈ ಆಸ್ತಿಯ ವಿಷಯವಾಗಿ ಅಣ್ಣ ಮಾತ್ರ ದಾನಪತ್ರ ಮಾಡಲು ಅವಕಾಶವಿಲ್ಲ. ಏಕೆಂದರೆ, ಆಸ್ತಿ ಅಣ್ಣನೊಬ್ಬನದಲ್ಲ. ತಂಗಿಯಂದಿರಿಗೂ ಹಕ್ಕಿದೆ. ಅವರ ಆಸ್ತಿಯನ್ನು ಅವರಿಗೇ ದಾನ ಮಾಡುವ ಹಕ್ಕು ಅಣ್ಣನಿಗಿಲ್ಲ.
ಎಲ್ಲರೂ ಒಪ್ಪಿದರೆ ನೋಂದಾಯಿತ ವಿಭಾಗ ಪತ್ರ ಮಾಡಿಕೊಳ್ಳಬಹುದು. ಆಸ್ತಿಯಲ್ಲಿ ಸಮ ಭಾಗದ ಹಕ್ಕಿದ್ದರೂ ಸಮ ಭಾಗವನ್ನೇ ಪಡೆಯಬೇಕೆಂದಿಲ್ಲ. ಸ್ವಇಚ್ಛೆಯಿಂದ ತಂಗಿಯರು ಕಡಿಮೆ ಭಾಗವನ್ನೂ ಪಡೆಯಬಹುದು.