ಪತಿ ನಾಗಚೈತನ್ಯರಿಂದ ವಿಚ್ಛೇದನ ಪಡೆದ ಬಳಿಕ ನಟಿ ಸಮಂತಾಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಈ ನಡುವೆ ಸಮಂತಾ & ಕಂಠದಾತೆ ಚಿನ್ಮಯಿ ಶ್ರೀಪಾದ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗುತ್ತಿದೆ.
ಹೌದು, ‘ಯಶೋದಾ’ ಚಿತ್ರದ ನಿರ್ಮಾಪಕರು ಕಂಠದಾತೆ ಚಿನ್ಮಯಿಗಾಗಿ ಹುಡುಕಾಡುತ್ತಿದ್ದರೆ, ಸಮಂತಾ ನನ್ನ ಪಾತ್ರಕ್ಕೆ ನಾನೇ ಧ್ವನಿ ನೀಡುತ್ತೇನೆಂದು ಹಠ ಹಿಡಿದಿದ್ದಾರಂತೆ. ‘ಏ ಮಾಯಾ ಚೇಸ್ಯಾವೆ’ ಸಿನಿಮಾದಲ್ಲಿ ಸಮಂತಾಗೆ ಧ್ವನಿ ನೀಡಿದ ಬಳಿಕ ಸಮಂತಾರ ಎಲ್ಲಾ ಸಿನಿಮಾಗಳಿಗೂ ಚಿನ್ಮಯಿ ಅವರೇ ಧ್ವನಿಗೂಡಿಸುತ್ತಿದ್ದರು.