ಅಜ್ಜಿ ತನ್ನ ತಂದೆಯಿಂದ ಬಂದ ಆಸ್ತಿಯನ್ನು ವಿಲ್ ಮಾಡಬಹುದೇ: ಅಜ್ಜಿಗೆ ಅವರ ತಂದೆಯಿಂದ ಬಂದ ಆಸ್ತಿ, ಅವರ ಪ್ರತ್ಯೇಕ ಆಸ್ತಿ ಆಗಿರುತ್ತದೆ. ಅದರ ಮೇಲೆ ಅಜ್ಜಿಗೆ ಸಂಪೂರ್ಣ ಹಕ್ಕು ಇರುತ್ತದೆ. ತನಗೆ ಬೇಕಾದ ರೀತಿಯಲ್ಲಿ ಆ ಆಸ್ತಿಯನ್ನು ಅವರು ಉಪಯೋಗಿಸಬಹುದು ಮತ್ತು ಹೇಗೆ ಬೇಕಾದರೂ ಪರಭಾರೆ ಮಾಡಬಹುದು.
ಇನ್ನು, ಒಂದು ವೇಳೆ ಅಜ್ಜಿ ತನ್ನಿಚ್ಛೆಯಂತೆ ನಿಮಗೆ ಅಥವಾ ಬೇರೆ ಯಾರಿಗಾದರೂ ಆ ಆಸ್ತಿಯನ್ನು ವಿಲ್ ಮಾಡಿದ್ದರೆ, ಅದು ಅವರಿಗೇ ಸೇರುತ್ತದೆ. ಬೇರೆ ವಾರಸುದಾರರಿಗೆ ಅದರಲ್ಲಿ ಯಾವುದೇ ಹಕ್ಕು ಇರುವುದಿಲ್ಲ.