ರೈತರ ಆರ್ಥಿಕತೆಯ ಸಬಲೀಕರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ವರ್ಷ 3 ಕಂತುಗಳಲ್ಲಿ ರೂ 6,000 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಹೌದು, ಇದುವರೆಗೆ ನರೇಂದ್ರ ಮೋದಿ ಸರ್ಕಾರ 11 ಕಂತುಗಳಲ್ಲಿ ಫಲಾನುಭವಿ ರೈತರಿಗೆ ಹಣ ನೀಡಿದೆ. ರೈತರ ಖಾತೆಗೆ 12ನೇ ಕಂತಿನ ಹಣ ಜಮೆಯಾಗಬೇಕಾದರೆ ಕೆವೈಸಿ ಮಾಡಿಕೊಳ್ಳುವಂತೆ ಇದೇ ತಿಂಗಳ 12ರವರೆಗೆ (ಇಂದು೦ ಗಡುವು ನೀಡಲಾಗಿದೆ. ಇಂದು ಗಡುವು ಪೂರ್ಣಗೊಳ್ಳಲಿದ್ದು ರೈತರು ಕೂಡಲೇ ಈ ಕೆವೈಸಿ ಮಾಡಿಸಿಕೊಳ್ಳುವಂತೆ ಕೋರಲಾಗಿದೆ