ಆಧಾರ್ ಕಾರ್ಡ್ನ್ನು 10 ವರ್ಷಗಳ ಹಿಂದೆ ಮಾಡಿಸಿದ್ದವರು ಮತ್ತೊಮ್ಮೆ ದಾಖಲಾತಿಗಳನ್ನು ನವೀಕರಣ ಮಾಡಿಸಿಕೊಳ್ಳಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಸೂಚಿಸಿದೆ.
ಆಧಾರ್ ಕಾರ್ಡ್ಹೊಂದಿರುವ ವ್ಯಕ್ತಿಗಳು ವಿಳಾಸ ದೃಢೀಕರಣ ಪತ್ರ, ಗುರುತಿನ ದಾಖಲೆ ಹಾಗೂ ಸದ್ಯದ ಎಲ್ಲಾ ಮಾಹಿತಿಗಳನ್ನು ಅಪ್ಡೇಟ್ ಮಾಡುವಂತೆ ಸೂಚಿಸಲಾಗಿದೆ. 10 ವರ್ಷದ ಹಿಂದೆ ಪಡೆದ ಎಲ್ಲಾ ಆಧಾರ್ ಕಾರ್ಡ್ದಾರರಿಗೆ ಇದು ಕಡ್ಡಾಯ. ಆಧಾರ್ ನೋಂದಣಿ ಕೇಂದ್ರಗಳಲ್ಲಿ ಈ ಸೌಲಭ್ಯ ಒದಗಿಸಲಾಗಿದೆ.