ಸರಳ ವಾಸ್ತು ಖ್ಯಾತಿಯ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಹತ್ಯೆಯ ಸತ್ಯ ಬಹಿರಂಗವಾಗಿದ್ದು, ಈ ಕುರಿತು ಪೊಲೀಸರು ಹುಬ್ಬಳ್ಳಿಯ ಜೆಎಂಎಫ್ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.
ಹೌದು, ವರದಿಯಲ್ಲಿ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಅವರು ಶ್ರೀಗಳು ಬಸವರೆಡ್ಡಿ ಚೌಡರೆಡ್ಡಿ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದರು. ಈ ಆಸ್ತಿಯನ್ನು ಆರೋಪಿಗಳಾದ ಮಂಜುನಾಥ ಮತ್ತು ಮಹಾಂತೇಶ ಪುಸಲಾಯಿಸಿ ಶಿರ್ಕೆ ಎಂಬುವವರಿಗೆ ಮಾರಿಸಿದ್ದರು. ವಿಷಯ ತಿಳಿದು ಗುರೂಜಿ ನ್ಯಾಯಾಲಯದಿಂದ ತಡೆ ತಂದಿದ್ದರು. ಇದರಿಂದ ಕುಪಿತಗೊಂಡು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.