ಉತ್ತಮ ನಿದ್ದೆ ಹೃದಯರಕ್ತನಾಳದ ಆರೋಗ್ಯಕ್ಕೆ ಉತ್ತಮ ಎಂದು ಅಮೆರಿಕದ ಹಾರ್ಟ್ ಅಸೋಸಿಯೇಷನ್ ತಿಳಿಸಿದ್ದು,,ಉತ್ತಮ ನಿದ್ದೆ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯವಾಗಿದ್ದು, ಹೃದಯರಕ್ತನಾಳದ ಖಾಯಿಲೆಗಳು ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ಒಳ್ಳೆಯ ನಿದ್ದೆ ಮಾಡಿದರೆ ತೂಕ, ರಕ್ತದೊತ್ತಡ ಅಥವಾ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದಾಗಿದ್ದು, ದಿನದ 24 ಗಂಟೆಯಲ್ಲಿ 7-8 ಗಂಟೆ ನಿದ್ದೆ ಮಾಡಿ. ಇನ್ನು ಬೆಳಗ್ಗೆದ್ದ ಕೂಡಲೇ ಫೋನ್ ನೋಡಬೇಡಿ. ದಿನವೆಲ್ಲಾ ಒತ್ತಡದಿಂದಲೇ ಆರಂಭವಾಗುತ್ತದೆ.
ಸುಖ ನಿದ್ರೆಗೆ ಇಲ್ಲಿವೆ ಕೆಲ ಸಲಹೆ…
ಹಗಲಿನಲ್ಲಿ ಮನೆ ತುಂಬಾ ಸೂರ್ಯನ ಬೆಳಕಿರಲಿ.
ಸಂಜೆ ನೀಲಿ ಬೆಳಕಿನಲ್ಲಿರುವುದನ್ನು ಆದಷ್ಟು ಕಡಿಮೆ ಮಾಡಿ.
ಮಲಗುವ ವೇಳೆಯಲ್ಲಿ ಕಾಫಿಯನ್ನು ಸೇವಿಸಬೇಡಿ.
ಹಗಲಿನಲ್ಲಿ ದೀರ್ಘ ಸಮಯ/ಅನಿಯಮಿತ ನಿದ್ರೆಯನ್ನು ಮಾಡಬೇಡಿ.
ಮಲಗಿ ಏಳಲು ನಿರ್ದಿಷ್ಟ ಸಮಯ ಇಟ್ಟುಕೊಳ್ಳಿ.
ಮದ್ಯಪಾನ ಮಾಡಬೇಡಿ.
ಮಲಗುವ ಕೋಣೆ & ಪರಿಸರ ಅತ್ಯುತ್ತಮವಾಗಿರಲಿ.
ಕೋಣೆಯೊಳಗೆ ಉಷ್ಣತೆ ನಿಮಗೆ ಸರಿ ಎನಿಸುವಂತೆ ಇರಲಿ.
ರಾತ್ರಿ ಊಟವನ್ನು ತುಂಬಾ ತಡವಾಗಿ ಸೇವಿಸಬೇಡಿ.