ದೇಶದ ಚಿನಿವಾರ ಪೇಟೆಯಲ್ಲಿ ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಇಂದು ಮತ್ತೆ 440 ರೂ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ ಕೂಡಾ 200 ರೂ ಏರಿಕೆಯಾಗಿದೆ.
ಹೌದು, 22 ಕ್ಯಾರೆಟ್ನ 10ಗ್ರಾಂ ಚಿನ್ನದ ಬೆಲೆ 400 ರೂ ಏರಿಕೆಯಾಗಿ 47,750 ರೂ ಆಗಿದ್ದು, 24 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 440 ರೂ ಏರಿಕೆಯಾಗಿ 52,100 ರೂ ದಾಖಲಾಗಿದ್ದು, 1 ಕೆಜಿ ಬೆಳ್ಳಿ ಬೆಲೆ 200 ರೂ ಹೆಚ್ಚಳವಾಗಿ 62,000 ರೂ ಆಗಿದೆ.
ಇನ್ನು, ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10ಗ್ರಾಂ ಚಿನ್ನದ ಬೆಲೆ 47,800 ರೂ. ಆಗಿದೆ. 24 ಕ್ಯಾರೆಟ್ನ 10ಗ್ರಾಂ ಚಿನ್ನದ ಬೆಲೆ 52,150 ರೂ ಇದ್ದು, ದೇಶಸ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದ್ದು, ಚೆನ್ನೈ- 48,350 ರೂ, ಮುಂಬೈ- 47,750 ರೂ, ದೆಹಲಿ- 47,900 ರೂ, ಹೈದರಾಬಾದ್- 47,750 ರೂ ದಾಖಲಾಗಿದೆ.